ಶ್ರೀವರಾಹಗಿರಿ ವರ್ಲಕೊಂಡ ಚಾರಿಟಬಲ್ ಟ್ರಸ್ಟ್ ರಚನೆಯ ಮುಖ್ಯ ಉದ್ದೇಶ ವರಾಹಗಿರಿ ಬೆಟ್ಟವನ್ನು ಮೂಲಭೂತವಾಗಿ ಅಭಿವೃದ್ಧಿಪಡಿಸುವುದು. ಇದರಿಂದ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಡಬೇಕು, ವರಾಹಗಿರಿ ಬೆಟ್ಟದ ಮೇಟ್ಟಿಲು ನಿರ್ಮಾಣ ಮಾಡಲು ಈಗಾಗಲೇ ಜಗದೀಶ್ ಎಂಬುವವರ ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ವರಾಹಗಿರಿ ಬೆಟ್ಟಕ್ಕೆ ಸುಮಾರು 1500ಕ್ಕೂ ಅಧಿಕ ಮೆಟ್ಟಿಲು ನಿರ್ಮಾಣ ಮಾಡಲು ಉದ್ದೇಶಿಲಾಗಿದೆ. ಒಂದು ಮೆಟ್ಟಿಲು ನಿರ್ಮಾಣ ಮಾಡಲು ಸುಮಾರು 6500 ಸಾವಿರ ರೂಪಾಯಿ ಖರ್ಚು ಬರುತ್ತದೆ. ಇದರಿಂದ ಬೆಟ್ಟದ ಅಭಿವೃದ್ದಿಗೆ ದಾನಿಗಳ ಸಹಕಾರ ಬೇಕಾಗಿದ್ದು, ದಾನಿಗಳು ಸ್ವಯಂ ಇಚ್ಛೆಯಿಂದ ಮುಂದೆ ಬರಬೇಕೆಂದು ಅವರು ಮನವಿ ಮಾಡಿದರು.